ಡೆಂಜರ್ ಉಗ್ರಾಣ!

0
1099

ಗದಗ – 6 ನವೆಂಬರ್ 2018,

ಸೋಮವಾರ:ನಮ್ಮ ದಿನನಿತ್ಯದ ಗೃಹ ಬಳಕೆಗೆ ಅತೀ ಅವಶ್ಯಕವಾಗಿ ಬೇಕಾಗಿರುವುದು ಅಡುಗೆ ಅನಿಲ. ಗ್ಯಾಸ್ ಕಂಪನಿಗಳು ಈ ಅಡುಗೆ ಅನಿಲವನ್ನು ಸಿಲಿಂಡರಗಳಲ್ಲಿ ತುಂಬಿ ಮನೆ ಮನೆಗೆ ವಿತರಿಸುತ್ತಿವೆ. ಹಲವಾರು ಭಾರಿ ಈ ಗ್ಯಾಸ್ ಸಿಲಿಂಡರಗಳು ಆಕಸ್ಮಿಕವಾಗಿ ಸ್ಪೋಟಗೊಂಡು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಇದರ ಸ್ಪೋಟದ ತೀವ್ರತೆಗೆ ಸಂಪೂರ್ಣ ಮನೆ ಬೆಂಕಿಗೆ ಆಹುತಿಯಾದದ್ದು ನಿದರ್ಶನಗಳಿವೆ. ಒಂದು ಗ್ಯಾಸ್ ಸಿಲಿಂಡರ್ ಇಷ್ಟು ದೊಡ್ಡ ಅನಾಹುತ ಸೃಷ್ಟಿಸಬಹುದಾದರೆ ಒಂದೇ ಸ್ಥಳದಲ್ಲಿ ಶೇಖರಿಸಿದ ನೂರಾರು ಸಿಲಿಂಡರಗಳು ಸ್ಪೋಟಗೊಂಡರೆ ಆಗಬಹುದಾದ ಅನಾಹುತ ಊಹಿಸಿಕೊಳ್ಳಿ !

ಜನರ ಬದುಕಿನೊಂದಿಗೆ ಕೆಲ ಗ್ಯಾಸ್ ಕಂಪನಿ ವಿತರಕರು ಚೆಲ್ಲಾಟವಾಡುತ್ತಿದ್ದದ್ದು ರಾಜ್ಯಾದಂತ ಕಂಡು ಬಂದಿದೆ. ಗ್ಯಾಸ್ ಕಂಪನಿ ವಿತಕರ ಆಗುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಸರ್ಕಾರಿ ಸೌಮ್ಯದ ಪ್ರತಿಷ್ಠಿತ ಕಂಪನಿಗಳಾದ (I.ಔ) ಇಂಡಿಯನ್ ಆಯಿಲ್, (ಊ.P) ಹಿಂದುಸ್ತಾನ ಪೆಟ್ರೋಲಿಯಂ ಹಾಗೂ ಭಾರತ ಪೆಟ್ರೊಲಿಯಂ (ಃ.P) ಇವರು ಒಂದು ಪ್ರದೇಶದ ಜನಸಂಖ್ಯೆ ಮತ್ತು ಬೇಡಿಕೆ ಅನುಗುಣವಾಗಿ ಗ್ಯಾಸ್ ವಿತಕರರನ್ನು ನೇಮಿಸಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುತ್ತಾರೆ. ಗ್ಯಾಸ್ ವಿತಕರಾಗಲು ಬಯಸುವ ಅರ್ಜಿದಾರರು ಕೆಲ ನಿಯಮಗಳನ್ನು ಮತ್ತು ಮಾರ್ಗ ಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇಂತಹ ನಿಯಮಗಳಲ್ಲಿ ಒಂದು ನಿಯಮ…. ಗ್ಯಾಸ್ ಸಿಲಿಂಡರ ಶೇಖರಿಸಲು ಬೇಕಾಗುವ ಉಗ್ರಾಣ, ವಸತಿ ಅಥವಾ ಜನಬೀಡ ಪ್ರದೇಶದಿಂದ ದೂರವಿರಬೇಕು. ಅಂತಹ ಉಗ್ರಾಣದ 3 ಕಿ.ಮೀ. ಪರಿಮಿತಿಯಲ್ಲಿ ಯಾವುದೇ ಶಾಲೆ, ಆಸ್ಪತ್ರೆ, ಮಾರುಕಟ್ಟೆ ಅಥವಾ ಕಾಲೇಜುಗಳು ಇರಬಾರದು ಎನ್ನುವ ಸ್ಪಷ್ಟ ಮಾರ್ಗಸೂಚಿಗಳು ಇವೆ. ಇವುಗಳನ್ನೆಲ್ಲಾ ಗಾಳಿಗೆ ತೂರಿ ಕೆಲ ಗ್ಯಾಸ್ ಕಂಪನಿ ವಿತಕರರು ಜನಬೀಡ ವಸತಿ ಪ್ರದೇಶದಲ್ಲೆ ನೂರಾರು ತುಂಬಿದ ಗ್ಯಾಸ್ ಸಿಲಿಂಡರ ಉಗ್ರಾಣವನ್ನು ಇಟ್ಟುಕೊಂಡಿದ್ದಾರೆ.

ಇಂತಹ ಒಂದು ಉಗ್ರಾಣ ಗದಗ ಪಟ್ಟಣ ನಗರದ ಸಾಯಿ ಮಂದಿರದ ಹತ್ತಿರದಲ್ಲಿದೆ. ಈ ಉಗ್ರಾಣದ ಸುತ್ತಮುತ್ತಲು ವಸತಿ ಹಾಗೂ ಜನಬೀಡ ಎ.ಪಿ.ಎಂ.ಸಿ. ಮಾರುಕಟ್ಟೆ ಕೂಡ ಇದೆ. ವಿಪರ್ಯಾಸವೆಂದರೆ ಉಗ್ರಾಣದ ಮುಂದೆಯೇ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆ ಕೂಡ ಇರುವುದು ಖೇದಕರ ಸಂಗತಿ. ಈ ಡೆಂಜರ್ ಉಗ್ರಾಣದ ಎತ್ತಂಗಡಿಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಮಾತಾಗಿದೆ. ಇಂತಹ ಅನೇಕ ಡೇಂಜರ್ ಉಗ್ರಾಣಗಳನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಿಸಲು ಸರ್ಕಾರ ಕಠಿಣ ಕ್ರಮ ಜರುಗಿಸಿ ಮುಂದೆ ನಡೆಯಬಹುದಾದ ಭಾರಿ ಅನಾಹುತಗಳನ್ನು ತಡೆ ಹಿಡಿಯಬಹುದು.

LEAVE A REPLY

Please enter your comment!
Please enter your name here