ಜಗದ್ಗುರು ಬಸವಣ್ಣವರನ್ನು ನಿಜವಾದ ಅರ್ಥದಲ್ಲಿ ತಿಳಿದುಕೊಂಡು ಅವರಂತೆಯೇ ಸಮಾಜಕ್ಕೆ ಮಾದರಿಯಾದ ಮಹಾನ್ ಸ್ವಾಮಿಯನ್ನು ನಾವು ಕಳೆದುಕೊಂಡಿದ್ದೇವೆ. ಗದಗಿನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು ನಮ್ಮೆಲ್ಲರಿಗೂ ತುಂಬಲಾರದ ನಷ್ಟ. ಸರಳ ಜೀವನದಲ್ಲಿ ವಿಶ್ವಾಸ ಇಟ್ಟಿದಂತಹ ಶ್ರೀ ಸಿದ್ದಲಿಂಗ ಸ್ವಾಮಿಗಳು ಸಮಾಜದ ಎಲ್ಲಾ ವರ್ಗದ ಜನರೊಂದಿಗೂ ಬೆರೆಯುತ್ತಿದ್ದರು. ಅವರ ಈ ಸರಳತೆ ಸಮಾಜದ ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಇಂತಹ ಮಹಾನ್ ಮಾನವತಾವದಿಯನ್ನು ನಾವು ಎಂದು ಮರೆಯಲಾಗದು.