ಪಬ್ಲಿಕ್ ಟಿವಿಯಲ್ಲಿ ಬುಡಬುಡಕಿ ಸಮಾಜಕ್ಕೆ ಅವಮಾನ!
ಶತ-ಶತಮಾನಗಳಿಂದ ಪ್ರಚಲಿತವಿರುವ ಹಾಗೂ ಹಿಂದೂ ಧರ್ಮದ ಬುನಾದಿ ಜ್ಯೋತಿಷ್ಯ ಶಾಸ್ತ್ರವನ್ನು ಅವಮಾನಿಸಿದವನನ್ನು ಪಬ್ಲಿಕ್ ಹೀರೊ ಅಂತಾ ಬಿಂಬಿಸಿದೆ ರಂಗನಾಥ್ ಸಾರಥ್ಯದ ಪಬ್ಲಿಕ್ (ಟಾಯ್ಲಟ) ಟಿವಿ.
ಕರ್ನಾಟಕದಲ್ಲಿ ಎಲ್ಲರಿಗೂ ಚೆನ್ನಾಗಿ ಗೊತ್ತಿರುವ ಆಲ್ ರೈಟ್ (ಆಲ್ವೇಸ್ ಟೈಟ್) ರಂಗಣ್ಣನ ಈ ಪಬ್ಲಿಕ್ ಟಿವಿ ಚಾನೆಲ್, ತಾನೇ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತದೆ!
ಪ್ರತಿದಿನ ರಾತ್ರಿ 9.45ಕ್ಕೆ ಪ್ರಸಾರವಾಗುವ ಈ ಪಬ್ಲಿಕ್ ಹೀರೊ ಎನ್ನುವ ಕಾರ್ಯಕ್ರಮವಂದನ್ನು ಬಿತ್ತರಿಸುವ ಈ ಚಾನೇಲ್ ಇವತ್ತು ದಿನಾಂಕ 17-12-2018ರಂದು ಒಂದು ಎಡವಟ್ಟು ಮಾಡಿಕೊಂಡಿದೇ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣುವ ಮತ್ತು ಸಾವಿರಾರು ವರ್ಷಗಳಿಂದ ಸರಸ್ವತಿಯ ಅನುಗ್ರಹ ಮತ್ತು ತಮ್ಮ ಕುಲಕಸಬಾದ ಜ್ಯೋತಿಷ್ಯ ವೃತ್ತಿಯನ್ನು ಹೊಂದಿದ ಬುಡಬುಡಕಿ ಸಮಾಜದವರನ್ನು ಮೊಸಗಾರರಂತೆ ಹಿಯಾಳಿಸಿದ ಪ್ರಸಂಗ ಜರುಗಿತು.
ತುಮಕೂರು ಜಿಲ್ಲೆಯ ಪಾವಗಡ ಊರಿನವನಾದ ನವೀನ ಎಂಬ ಕಮಂಗಿಯನ್ನು ಹಿಡಿದುಕೊಂಡು ಬಂದು, ಪಬ್ಲಿಕ್ (ಟಾಯ್ಲಟ) ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ಜರುಗಿಸಿದ ಟಿವಿ ನಿರೂಪಕರು ತಾಳ ಮೇಳವಲ್ಲದ ಪ್ರಶ್ನೆ ಅವನಿಗೆ ಕೇಳುತ್ತಿದ್ದರು. ಮರು ಉತ್ತರವಾಗಿ ಆ ಕಮಂಗಿ ತಾನೇನೋ ದೊಡ್ಡ ಸಾಧನೆಗ್ಯದಂತೆ ಬುಡಬುಡಕಿ ವೃತ್ತಿಗೆ ಅಪಮಾನವೇಸಗಿದ!
ಕರ್ನಾಟಕದಲ್ಲಿ ಬಡ ಅಲೆಮಾರಿ ಜನಾಂಗವಾದ ಬುಡಬುಡಕಿ ಸಮಾಜವನ್ನು ಗುರಿಯಾಗಿಸುವಂತಹ ಇಂತಹ ಟಾಯ್ಲಟ ಟಿವಿ ಚಾನೆಲಗಳು ಸಮಾಜದ ಜನರ ಗೋಳನ್ನು ಮೊದಲು ಪ್ರದರ್ಶಿಸಲಿ. ಸ್ವಾತಂತ್ರ್ಯ ಭಾರತದ 76 ವರ್ಷಗಳು ಕಳೆದರೂ ಸಾಮಾಜಿಕವಾಗಿ, ಆರ್ಥಿಕವಾಗಿ, ಶ್ಯೆಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಈ ಬುಡಬುಡಕಿ, ಗೋಂಧಳಿ, ಜೋಷಿ ಮತ್ತು ವಾಸುದೇವ ಸಮಾಜಗಳ ಜನರು ಅನುಭವಿಸುತ್ತಿರುವ ನೋವುಗಳ ಮೇಲೆ ಮೊದಲು ಬೆಳಕು ಚೆಲ್ಲಲ್ಲಿ.
ಈ ಜಗತ್ತಿನಲ್ಲಿ ಎಲ್ಲರಿಗೂ ಅವರದೇ ಆದ ಒಂದು ವೃತ್ತಿ ಜೀವನ ಉಂಟು. ಬೇರೆಯವರ ವೃತ್ತಿಯನ್ನು ಗೌರವಿಸುವುದು ಮಾನವೀಯ ಲಕ್ಷಣ. ಹಾಗೆಯೇ ಬುಡಬುಡಕಿ ಸಮಾಜದ ಜ್ಯೋತಿಷ್ಯ ವೃತ್ತಿಯನ್ನು ಅವಮಾನಿಸುವುದು ಅನೇಕ ಜನರ ನಂಬಿಕೆಗೆ ಮತ್ತು ಹಿಂದೂ ಧರ್ಮಕ್ಕೆ ಅಗೌರವ ತೋರಿಸಿದಂತಾಗುತ್ತದೆ.
ಯಾವುದೇ ಸುದ್ದಿಯನ್ನು ಬಿತ್ತರಿಸುವ ಮೊದಲು ಸುದ್ದಿಯ ಘನತೆ ಮತ್ತು ಅದರ ಆಳವಾದ ಜ್ಞಾನವನ್ನಿಟ್ಟಕೊಳ್ಳುವುದನ್ನು ಈ ಟಿವಿ ಮಾಧ್ಯಮದವರು ಮೊದಲು ಕಲಿಯಬೇಕಾಗಿದೆ.
ವಿಡಿಯೋ ವೀಕ್ಷಿಸಲು ಈ ಚಿತ್ರದ ಮೇಲೆ ಕ್ಲಿಕ್ ಮಾಡಿ

ವಿಶಾಲ ಸುಗತೆ
ಉಪ-ಸಂಪಾದಕರು
ಗುಪ್ತಚಾರ ವಾರ ಪತ್ರಿಕೆ
The article is all about Budbudki Samaj and a TV program conducted by Public TV channel. For mode details kindly watch the featured video.