Why is Sensex falling
Why is Sensex falling

ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಇಂದು 2000 ಅಂಕಗಳಷ್ಟು ಕುಸಿದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ! ಕಳೆದ 10 ವರ್ಷಗಳಲ್ಲಿ, ಒಂದೇ ದಿನದ ಭಾರಿ ಕುಸಿತ ಇದಾಗಿದ್ದು, ಒಂದು ಹಂತಕ್ಕೆ 2300 ಕ್ಕಿಂತಲು ಹೆಚ್ಚಿಗೆ ಅಂಕಗಳಷ್ಟು ಕುಸಿದು ನಕಾರಾತ್ಮಕ ವಹಿವಾಟು ಮಾಡಿದೆ. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಈ ದಿನದ ಗರಿಷ್ಟ ಕುಸಿತ 2300 ಕ್ಕೆ ತಲುಪಿ, ದಿನದ ವಹಿವಾಟಿನ ಮುಕ್ತಾಯ ಹಂತಿನಲ್ಲಿ 1942 ಅಂಕಗಳಷ್ಟು ಕುಸಿತ ಕಂಡು, 35,635 ರಲ್ಲಿ ವಹಿವಾಟು ನಡೆಸುತ್ತಿದೆ.

sensex bearish
sensex bearish

ದಿನೇ-ದಿನೇ ನಕಾರಾತ್ಮಕ ವಹಿವಾಟಿಗೆ ಮುಖ್ಯ ಕಾರಣಗಳು ಯೆಸ್ ಬ್ಯಾಂಕ್ ಆರ್ಥಿಕ ದಿವಾಳಿಯ ಹಾದಿ ಹಿಡಿದಿರುವುದು, ಕೋರೊನಾ ವೈರಸ್ ಭೀತಿ ಹಿನ್ನೆಲೆ, ಜಾಗತಿಕ ವಾಣಿಜ್ಯ ಸಂಘರ್ಷದಿಂದ ಯುದ್ಧ ಭೀತಿ, ನೋಟ ಬ್ಯಾನ್, ಹೀಗೆ ಹತ್ತು ಹಲವಾರು ಕಾರಣಗಳು ಎಂದು ಮಾರುಕಟ್ಟೆ ಪರಿಣಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳಿಂದ ಕರಡಿ ಕುಣಿತಕ್ಕೆ ನಲಗುತ್ತಿರುವ ಷೇರು ಮಾರುಕಟ್ಟೆಯು ಮುಂದಿನ ದಿನಮಾನಗಳಲ್ಲಿ ಯಾವ ತರಹದ ವಹಿವಾಟು ಮಾಡಬಹುದೆಂದು ಇಗ ಹೇಳಲು ಅಸಾಧ್ಯ.

 

LEAVE A REPLY

Please enter your comment!
Please enter your name here