ಅನಿರಿಕ್ಷೀತ ಕೊರೊನಾ ವೈರಸನ ಕಾರಣಕ್ಕಾಗಿ ದೇಶಾದ್ಯಂತ ಹೇರಲಾದ ಲಾಕಡಾನ್ ಪರಿಣಾಮ, ಅನೇಕ ಅಸಹಜ ಘಟನೆಗಳು ಜರಗುತ್ತಿವೆ. ಅದರಲ್ಲಿ ಮುಖ್ಯವಾಗಿ ಪೊಲೀಸರು ಜನರೋಂದಿಗೆ ನಡೆದುಕೋಳ್ಳುತ್ತಿರುವ ರೀತಿ ಪ್ರಶ್ನಾರ್ಹವಾಗಿದೆ!
ಈ ಕೆಲ ದಿನಗಳ ಹಿಂದೆ ನಮ್ಮ ಪ್ರದಾನಮಂತ್ರಿಗಳು ರಾತೋರಾತ್ರಿ ಟಿ.ವಿಯಲ್ಲಿ ಕಾಣಿಸಿ, ದೇಶವನ್ನೂದ್ದೇಶಿಸಿ ಮಾತನಾಡುತ್ತ 21 ದಿನಗಳ ರಜೆಯೊಂದಿಗೆ ಲಾಕಡಾನ್ ಘೋಷಿಸಿದಾಗ ಅನೇಕರಿಗೆ ಸಂತಸದೋಂದಿಗೆ ಹಬ್ಬದ ವಾತಾವರಣ, ಏಕೆಂದರೇ 21 ದಿನಗಳ ಧೀರ್ಘ ರಜೆ ನಾವೆಂದು ಕೇಳಿಲ್ಲ-ನೋಡಿಲ್ಲ.ಕೊರೊನಾ ವೈರಸನ ಸೋಂಕು ನಿವಾರಣೆಗಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರ ತೆಗೆದುಕೋಂಡ ನಿರ್ಧಾರ, ಮೋದಮೊದಲಿಗೆ ‘ಸರಿ’ ಏನೋ ಅನಿಸಿತು, ನಂತರ ಈ ಲಾಕಡಾನನ ಕರಾಳ ರೂಪ ನಮಗೇಲ್ಲರಿಗೂ ಕಾಣುತ್ತಿದೆ.
ಏಲ್ಲರಿಗೂ ಗೋತ್ತಿರುವಂತೆ, ಈ ಸರ್ಕಾರದ ಆದೇಶ ‘ತುಘಲಕ ದರ್ಬಾರ’ನಂತೆ ಆಗಿದೆ. ಸರ್ಕಾರ ಮತ್ತು ಇಲಾಖೆ ಮಟ್ಟದಲ್ಲೇ ಕಾರ್ಯವೈಕರಿ ಬಗ್ಗೆ ಅನೇಕ ಗೊಂದಲಗಳಿವೆ! ಈ ವಿಷಯದಲ್ಲಿ ಪೊಲೀಸ್ ಇಲಾಖೆಯು ಹೊರತಾಗಿಲ್ಲ.ಹಲವಾರು ಬಾರಿ ನಮ್ಮ ಪೊಲೀಸ್ ಇಲಾಖೆ ತಾಳ್ಮೇ-ನಿಷ್ಠೆಗೆ ಹೆಸರುವಾಸಿಯಾಗಿದೆ. ಅನೇಕ ವಿಷಯಗಳಲ್ಲಿ ಪೊಲೀಸರ ಸಂಯಮ ಶ್ಲಾಘನಾರ್ಹವಾಗಿದೆ. ಆದರೇ ಈ 21 ದಿನಗಳ ಲಾಕಡಾನನ ಪ್ರಾರಂಭದಲ್ಲೇ ಪೊಲೀಸರ ದುರವರ್ತನೆ ನಾಗರಿಕ ಸಮಾಜ ತೆಲೆ ತಗ್ಗಿಸುವಂತಾಗಿದೆ. ರಕ್ಷಕರು ಭಕ್ಷಕರಂತೆ ವರ್ತಿಸುತ್ತಿರುವುದು ಜನರಲ್ಲಿ ಆತಂಕ ತಂದೋಡ್ಡಿದೆ.
ಪೊಲೀಸರು ಬುಟು ಹಾಗೂ ಲಾಠಿಯಿಂದ ಥಳಿಸುತ್ತಿರುವ ದೃಶ್ಯ –
ಕಳೆದ ಕೆಲ ದಿನಗಳಿಂದ ಮಾದ್ಯಮ ಮತ್ತು ಸಾಮಾಜಿಕ ಜಾಲತಾನಗಳಲ್ಲಿ ಕಂಡ ಹಾಗೆ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳು ಜನರರನ್ನು ಮೃಗಗಳಿಗಿಂತಲು ಕಡೆಯಾಗಿ ನೊಡಿಕೊಂಡಿದ್ದು ಏಲ್ಲರು ಸಾಕ್ಷಿಯಾಗಿದ್ದಾರೆ. ಅವಶ್ಯಕ ದಿನಸಿ ವಸ್ತುಗಳ ಖರಿದಿಗೆ, ಆನಾರೋಗ್ಯ ಕಾರಣದ ಆಸ್ಪತ್ರೆ ಭೆಟಿಗೆ, ಇಂತಹ ಅನೇಕ ವೈಯಕ್ತಿಕ ಕಾರಣಗಳಿಂದ ಮನೆಯಿಂದ ಹೊರಗೆ ಬಂದವರ ಮೇಲೆ ಪೊಲೀಸರು ಕಾರಣ ಕೇಳದೆ ಲಾಠಿ, ಬುಟೂ ಹಾಗು ಗೋಲಿಬಾರ ಮೂಲಕ ತಮ್ಮ ಪೌರಷ ತೋರಿಸಿದ್ದಾರೆ. ಇನ್ನೂ ಮಾನವಿಯತೆ ಹೃದಯದ ಕೆಲ ಪೊಲೀಸ ಅಧಿಕಾರಿಗಳು ನಿರ್ಗತಿಕರಿಗೆ ಉಟದ ಫೋಟ್ಟಣ ಹಾಗು ನಿರನ್ನು ನೀಡಿ ಜನರ ಮೆಚ್ಚುಗೆಗಳಿಸಿದ್ದಾರೆ.
ತಪ್ಪೆ ಮಾಡದ ಕಾರಣದಿಂದಾಗಿ ಓದೆ ತಿಂದ ಹಾಗು ಪೊಲೀಸರ ಭಯದಿಂದ ಮನೆ ಹೊರಗೆ ಹೊಗದೆ, ಆಹಾರವಿಲ್ಲದೇ ನರಳಾಡುತ್ತಿರುವವರ ಗೋಳು ಕೇಳತಿರದು. ಯಾವುದೆ ಮುನ್ಸೂಚನೇ ಇಲ್ಲದೆ ‘ದೇಶವನ್ನು ಬಂದ್’ ಮಾಡಿಸಿ ಮನೆಯಲ್ಲೆ ರಾಮಾಯಣ ನೋಡಿ ಏಂದ ಮಹಾನ ಮೆಧಾವಿಗಳು, ಸಂಕಷ್ಟಕ್ಕೆ ಗುರಿಯಾದಂತಹ ಜನರ ಈ ಕೆಳಗೆ ಕಾಣಿಸಿದ ಪಂಚ ಪ್ರಶ್ನೇಗಳಿಗೆ ಯಾವಾಗ ಉತ್ತರಿಸುತ್ತಾರೋ ಗೋತ್ತಿಲ್ಲ!
ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ, 21 ದಿನಗಳ ದಿಗ್ಬಂದನ ಅವದಿಯ ಕುರಿತು ಪಂಚ ಪ್ರಶ್ನೇಗಳು –
1) ಸೂರು ಇಲ್ಲದ ಸಾವಿರಾರು ಅಲೇಮಾರಿ ಕೂಲಿ ಕಾರ್ಮಿಕರ ಹಸಿವಿನ ಬವಣೆಯನ್ನು ಹೇಗೆ ನಿಗ್ರಹಿಸುವಿರಿ?
2) ಹಳ್ಳಿಗಳಿಂದ ಪಟ್ಟಣ್ಣಕ್ಕೆ ಅಥವಾ ಮಹಾನಗರಗಳಿಗೆ ದುಡಿಯಲು ಹೋಗಿ, ಈಗ ತಮ್ಮ ಉರಿಗೆ ಮರಳಬೇಕೆನ್ನವವರಿಗೆ ಪರ್ಯಾಯ ಮಾರ್ಗ ಏನಾದರುವಿದೆಯೇ?
3) ಮಾರುಕಟ್ಟೆ ತೆರೆದಿರುತ್ತದೆ ಏಂದು ಸರಕಾರಿ ಪತ್ರಿಕಾ ಪ್ರಕಟಣೆ ಹೋರಡಿಸಿ, ನಂತರ ದಿನಸಿ ಅವಶ್ಯಕ ವಸ್ತುಗಳ ಖರೀದಿಗೆ ಹೋಗುವವರನ್ನು ಕಾರಣ ಕೇಳದೆ ಅನಾವಶ್ಯಕವಾಗಿ ಹೋಡೆಯುತ್ತಿರುವ ಪೊಲೀಸರ ಕ್ರಮ ಸರಿಯೇ?
4) ಏಲ್ಲವನ್ನು ಬಂದ್ ಮಾಡಿಸಿರುವ ಸರ್ಕಾರ ‘ಷೇರುಮಾರುಕಟ್ಟೆ’ಯನ್ನು ಚಾಲ್ತಿಯಲ್ಲಿಟ್ಟಿರುವ ಕಾರಣ?
5) ಡಾ.ಬಿಸ್ವರೂಪರಾಯ ಚೌದರಿ ಅವರು ಹೇಳುತ್ತಿರುವ ಹಾಗೆ ಕೊರೊನಾ ಒಂದು ಸಾಮಾನ್ಯ ರೋಗ ಹಾಗೂ ಈ ಲಾಕಡಾನ್ ಹಿಂದೆ ಅಂತರಾಷ್ಟೀಯ ಮಾಫೀಯಾ ಕೈವಾಡದ ಶಂಕೆ ವ್ಯಕ್ತಪಡಿಸಿರವುದು ನಿಜವೇ?
ಡಾ.ಬಿಸ್ವರೂಪರಾಯ ಚೌದರಿ ಅವರ ಈ ಮಾಫಿಯಾ ಕುರಿತಾದ ವಿಡಿಯೋ –
ಪ್ರಜಾಪ್ರಭುತ್ವ ರಾಷ್ರದಲ್ಲಿ, ಕಮು್ಯನಿಸ್ಟ ರೂಪದ ಪೊಲೀಸ ಗುಂಡಾಗಿರಿಯನ್ನು ಜನರು ಏಂದೂ ಮೆಚ್ಚರು. ಜನರ ರೋಷ ಪೊಲೀಸರ ವಿರುದ್ದ ಹೋರಾಟವಾಗಿ ಮಾರ್ಪಾಡುವ ಮುನ್ನವೇ, ಇದರ ಸುಕ್ಷಮತೆಯನ್ನು ಅರಿತು ಜನರೊಂದಿಗೆ ಸಂಯಮದಿಂದ ನಡೆದುಕೋಳ್ಳುಬೇಕು…
ಇನ್ನಾದರೂ ಪೊಲೀಸರು ‘ಪೋಲಿ’ ಗಳಂತೆ ವರ್ತಿಸುವುದು ಬಿಡುತ್ತಾರೆಂಬುವುದು ಜನರ ನಂಬಿಕೆ (ಈ ಲೇಖನ ಮಾನವಿಯತೆಯೇ ಇಲ್ಲದ ಪೊಲೀಸರಿಗೆ ಮಾತ್ರ ಅನ್ವಯಿಸುತ್ತದೆ. ನಿಷ್ಠೆ, ಶ್ರದ್ದೆ, ಮಾನವಿಯ ಗುಣಗಳಡಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೊಲೀಸ ಸಿಬ್ಬಂದಿಗೆ ಜನತೆ ಯಾವಾಗಲು ಚಿರರುಣಿಯಾಗಿರುತ್ತದೆ)